Bigg Boss Kannada Season 5 : ಕೃಷಿ ತಾಪಂಡ ಔಟ್ ಆಗಿದ್ದಾಕೆ ಸುದೀಪ್ ಕಾರಣವಂತೆ | Filmibeat Kannada

2017-11-20 2

Bigg Boss Kannada 5: Week 5: Did Krishi Thapanda blame Sudeep for her elimination.?


ಕೃಷಿ ಔಟ್ ಆಗಿದ್ದಕ್ಕೆ ಸುದೀಪ್ ಕಾರಣ.! ಇದೇನಿದು ಹೊಸ ಆರೋಪ.? 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐದನೇ ವಾರ ನಟಿ ಕೃಷಿ ತಾಪಂಡ ಔಟ್ ಆದರು. 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲ ದಿನದಿಂದಲೂ, ನಟಿ ಕೃಷಿ ತಾಪಂಡ ಸೆಲೆಬ್ರಿಟಿ ಸ್ಪರ್ಧಿಗಳ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅನುಪಮಾ ಗೌಡ, ಸಿಹಿ ಕಹಿ ಚಂದ್ರು, ಜಗನ್, ಆಶಿತಾ ಜೊತೆಗೆ ಹೆಚ್ಚು ಕಾಲ ಇರುತ್ತಿದ್ದ ಕೃಷಿ, ಅಡುಗೆ ಮನೆ ವಿಚಾರಕ್ಕೆ ಅನೇಕ ಬಾರಿ ದನಿ ಎತ್ತಿದ್ದಾರೆ. ಟಾಸ್ಕ್ ಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದ ನಟಿ ಕೃಷಿ ತಾಪಂಡ 'ಬಿಗ್ ಬಾಸ್' ಮನೆಯಿಂದ ಔಟ್ ಆಗಲು ಕಾರಣ ಏನು.?ನಟಿ ಕೃಷಿ ತಾಪಂಡ ಔಟ್ ಆಗಲು ಅನೇಕ ಕಾರಣಗಳು ಇರಬಹುದು. ಆದ್ರೆ, ತಾವು ಔಟ್ ಆಗಲು ಸುದೀಪ್ ಕಾರಣ ಅಂತ ಸ್ವತಃ ಕೃಷಿ 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಆರೋಪ ಮಾಡಿದ್ದಾರೆ.

Videos similaires